ಜ್ಞಾನ ಪ್ರಸಾರಕ
2.58K subscribers
2.31K photos
15 videos
1.1K files
511 links
ಪ್ರಚಲಿತ ವಿದ್ಯಮಾನಗಳು & GK
(ಕನ್ನಡ ಮತ್ತು ಇಂಗ್ಲಿಷ್)
Download Telegram
Good night to all....
Note

💐 ಕರ್ನಾಟಕ ತೊಗರಿ ಕಣಜ - ಗುಲ್ಬರ್ಗ

💐 ಕರ್ನಾಟಕದ ಮಾವಿನ ಹಣ್ಣಿನ ಕಣಜ - ಧಾರವಾಡ
ಟರ್ಕಿಯ ದೇಶದ ಹೆಸರನ್ನು ಟರ್ಕಿಯೆ ಎಂದು ಮರುನಾಮಕರಣ ಮಾಡಿದೆ.

ಅಂಕಾರ: ಟರ್ಕಿ ತನ್ನ ಹೆಸರನ್ನು 'ಟರ್ಕಿಯೆ' ಎಂದು ಬದಲಾಯಿಸಿಕೊಂಡಿದೆ. ಇನ್ನು ಮುಂದೆ ದೇಶವನ್ನು 'ಟರ್ಕಿಯೆ' ಎಂಬುದಾಗಿ ಕರೆಯುವಂತೆ ಕೋರಿ ವಿದೇಶಾಂಗ ಸಚಿವ ಮೆವ್ಲುಟ್ ಕಾವುಸೊಗ್ಲು ಅವರು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ.
ಟರ್ಕಿಯೆ ವಿದೇಶಾಂಗ ಸಚಿವರ ಪತ್ರ ಕೈ ಸೇರಿದೆ. ಈ ಕ್ಷಣದಿಂದಲೇ ಆ ರಾಷ್ಟ್ರದ ಹೆಸರಿನಲ್ಲಿನ ಬದಲಾವಣೆಯನ್ನು ಅನುಷ್ಠಾನಗೊಳಿಸಲಾಗಿದೆ' ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್‌ ಅವರ ವಕ್ತಾರ ಸ್ಟೀಫನ್ ದುಜಾರಿಕ್‌ ಹೇಳಿದ್ದಾರೆ' ಎಂದು ಮಾಧ್ಯಮಗಳು ವರದಿ ಮಾಡಿವೆ.

ದೇಶದ ಛಾಪನ್ನು ಮರುಸ್ಥಾಪಿಸುವ ಉದ್ದೇಶದಿಂದ ಇಂಥ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಟರ್ಕಿ ಎಂಬುದು ಒಂದು ವಿಧದ ಕೋಳಿಯ ಹೆಸರು. ಈ ಪಕ್ಷಿಯ ಹೆಸರಿನೊಂದಿಗೆ ಕೆಲ ನಕಾರಾತ್ಮಕ ಅರ್ಥಗಳು ತಳಕುಹಾಕಿಕೊಂಡಿವೆ. ಈ ನಕಾರಾತ್ಮಕ ಅಂಶಗಳಿಂದ ದೇಶದ ಹೆಸರನ್ನು ಬೇರ್ಪಡಿಸಬೇಕು ಎಂಬ ಉದ್ದೇಶವೂ ಈ ನಡೆಯ ಹಿಂದಿದೆ ಎನ್ನಲಾಗುತ್ತಿದೆ.

ಜಾಗತಿಕ ವೇದಿಕೆಗಳಲ್ಲಿ ದೇಶದ ಹೆಸರನ್ನು ಟರ್ಕಿಯೆ ಎಂದೇ ಬಳಸಬೇಕು ಎಂಬ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಅಧ್ಯಕ್ಷ ರಿಸಿಪ್ ತಯ್ಯಿಪ್ ಎರ್ಡೋಗನ್ ಅವರ ಕಚೇರಿ ಹೇಳಿದೆ.

Note
💐 ಟರ್ಕಿಯೆ ದೇಶ ರಾಜಧಾನಿ - ಅಂಕಾರ
ಓದಲೇಬೇಕಾದ ಮಾಹಿತಿ ಇದು

💐 2022 ನೇ ಸಾಲಿನ ಎಂಟನೇ ಆವೃತ್ತಿ ಅಂತರರಾಷ್ಟ್ರೀಯ ಯೋಗ ದಿನ - ಜೂನ್ 21 ರ ಥೀಮ್ - ಮಾನವೀಯತೆಗಾಗಿ ಯೋಗ (ಸ್ಥಳ - ಮೈಸೂರು)

💐 ರಾಜ್ಯಸಭೆಯ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವರು - ಉಪರಾಷ್ಟ್ರಪತಿ

💐 GST ಜಾರಿಗೆ ಬಂದ ವರ್ಷ 1 ಜುಲೈ 2017 (ಜಿ ಎಸ್ ಟಿ ದಿನ - ಜುಲೈ 01)

💐 ಐಪಿಎಲ್ ನಲ್ಲಿ ಟೋಪಿ ಗೆದ್ದ ಭಾರತದ ಮೊದಲ ಕೋಚ್ ಆಶಿಶ್ ನೆಹ್ರಾ (ಗುಜರಾತ್ ಟೈಟಾನ್ಸ್ ಕೋಚ್ )

💐 15 ನೇ ಆವೃತ್ತಿಯ ಐಪಿಎಲ್ ಟ್ರೋಪಿ ಗೆದ್ದ ತಂಡದ ಹೆಸರು - ಗುಜರಾತ್ ಟೈಟನ್ ಸ್

💐 ನಾಲ್ಕನೇ ಆವೃತ್ತಿ ಖೇಲೋ ಇಂಡಿಯಾ ಗೇಮ್ಸ್ ಆತಿಥ್ಯ ವಹಿಸಿಕೊಂಡ ರಾಜ್ಯ - ಹರ್ಯಾಣ ಪಂಚಕುಲಿ ಗ್ರಾಮ (ಕಳೆದ ವರ್ಷದ ಆತಿಥ್ಯ - ಅಸ್ಸಾಂ )

💐 ನೂತನ ಹಾಕಿ ರಾಂಕಿಂಗ್ ನಲ್ಲಿ ಮೊದಲ ಸ್ಥಾನ ಪಡೆದ ದೇಶ - ನೆದರ್ಲೆಂಡ್ (ಭಾರತ ನಾಲ್ಕನೇ ಸ್ಥಾನ )

💐 ಅಂತರರಾಷ್ಟ್ರೀಯ ತಂಬಾಕು ರಹಿತ ದಿನ -ಮೇ 31 (2022 ನೇ ಸಾಲಿನ ಥೀಮ್ - ಪರಿಸರ ಸಂರಕ್ಷಣೆ )

💐 ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕೋಡಿ ಬೇಂಗ್ರೆಗೆ ತಂಬಾಕು ಮುಕ್ತ ಹಳ್ಳಿ ಎಂಬ ಕೀರ್ತಿ ಪಡೆದುಕೊಂಡಿದೆ.

💐 ಪಿ ಎಮ್ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ ಬಗ್ಗೆ ಮಾಹಿತಿ.
ಓದಲೇಬೇಕಾದ ಮಾಹಿತಿ ಇದು

💐 ಶೌರ್ಯ ಚಕ್ರ ಪ್ರಶಸ್ತಿ ಪಡೆದ ಭಾರತದ ಮೊದಲ ಮಹಿಳೆ - ಗುಂಜನ್ ಸಕ್ಸೇನಾ

💐 ಭಾರತದಲ್ಲಿ ಮೊದಲ ಬಾರಿಗೆ ಪಕ್ಷಿಗಣಿತಿ ನಡೆಸಿದವರು - ಸಲಿಂ ಅಲಿ

💐 ಬರ್ಡ್ ಮ್ಯಾನ್ ಆಫ್ ಇಂಡಿಯಾ ಎಂದು ಸಲಿಂ ಅಲಿಗೆ ಕರೆಯಲಾಗುತ್ತದೆ.

💐 ಅತ್ಯಂತ ಕಡಿಮೆ ಅವಧಿಯಲ್ಲಿ ಗರಿಷ್ಠ ಉದ್ದದ ರಸ್ತೆಯನ್ನು ಉದ್ಘಾಟನೆ ಮಾಡಿ ದಾಖಲೆ ಬರೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

💐 ಪರಿಸರ ಕಾರ್ಯಕ್ಷಮತೆ ಸೂಚ್ಯಂಕ ದಲ್ಲಿ ಕೊನೆಯ ಸ್ಥಾನ‌ಪಡೆದ ದೇಶ - ಭಾರತ (ಮೊದಲ ಸ್ಥಾನ - ಡೆನ್ಮಾರ್ಕ್)
ಓದಲೇಬೇಕಾದ ಮಾಹಿತಿ ಇದು

💐 ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ ಏಕೈಕ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ವಿದಾಯ .

💐 ಅಂತರರಾಷ್ಟ್ರೀಯ ಯೋಗ ದಿನ - ಜೂನ್ 21

💐 ತೀವ್ರ ವಿದ್ಯುತ್ ಕೊರತೆಯಿಂದ ಪಾಕಿಸ್ತಾನ ಸರಕಾರ ರಾತ್ರಿಯ ವೇಳೆಯಲ್ಲಿ ಮದುವೆಯನ್ನು ನಿಷೇಧ ಮಾಡಿದ್ದಾರೆ.

💐 ವಿದೇಶಿ ಬೇಹುಗಾರಿಕೆ ಬೇದಿಸಲು ಚೀನಾ ಸರಕಾರವು ರಾಷ್ಟ್ರೀಯ ಭದ್ರತರ ಉಲ್ಲಂಘನೆ ಮಾಹಿತಿ ಕೊಟ್ಟವರಿಗೆ 15000 ಡಾಲರ್ ಬಹುಮಾನ ಘೋಷಣೆ ಮಾಡಿದೆ.

💐 ಭಾರತ ಮತ್ತು ವಿಯೆಟ್ನಾಂ ನಡುವೆ 2030 ವರೆಗೆ ಸೇನಾ ಸಹಕಾರ ಒಪ್ಂದಕ್ಕೆ ಸಹಿ ಹಾಕಲಾಗಿದೆ.

💐 ಆರ್ ಬಿ ಐ ಬ್ಯಾಂಕ್ ವರ್ಷದಿಂದಲೇ ಹೊಸದಾಗಿ ಡಿಜಿಟಲ್ ಕರನ್ಸಿ ಜಾರಿಗೆ ತರಲಿದೆ.

💐 ಬೆಂಗಳೂರು ತಂತ್ರಜ್ಞಾನ ಸಮಾವೇಶ 2022 ರ ಘೋಷವಾಕ್ಯ - ಟೆಕ್4 ನೇಕ್ಸ್ಟ್ ಚೇಸ್
🌲 ಮರುಭೂಮಿಯ ಬುಡಕಟ್ಟು ಜನಾಂಗಗಳು

ಗೋಬಿ ಮರುಭೂಮಿ - ಮಂಗೋಲಿಯ

. ಸಹರಾ ಮರುಭೂಮಿ - ಟಾರೆಜಸ್

. ಥಾರ್ ಮರುಭೂಮಿ - ಮೈನಾ

ಸೌದಿ ಅರೇಬಿಯಾ ಮರುಭೂಮಿ - ಬಿಡೋಯಿನ್

. ಅಟಕಾಮ ಮರುಭೂಮಿ - ಹೊಟೆಂಟೋಸ್

. ಕಲಹರಿ ಮರುಭೂಮಿ - ಬುಷ್ ಮನ್

. ಆಸ್ಟ್ರೇಲಿಯಾ - ಬಿಂಡುಬಸ್/ ಬಿಂಡುಬಿ
Photo from Ganga..
❇️ ಏಪ್ರಿಲ್ 12

🚀 ಮಾನವ ಬಾಹ್ಯಾಕಾಶ ಹಾರಾಟದ ಅಂತರಾಷ್ಟ್ರೀಯ ದಿನ

🚀ಶಾಂತಿಯುತ ಉದ್ದೇಶಗಳಿಗಾಗಿ ಬಾಹ್ಯಾಕಾಶವನ್ನು ಅನ್ವೇಷಿಸಲು ಮತ್ತು ನಿರ್ವಹಿಸಲು ಆಕಾಂಕ್ಷೆಗಳನ್ನು ಉತ್ತೇಜಿಸುವ ಗುರಿ.

🚀12 ಏಪ್ರಿಲ್ 1961 ರಂದು ಸೋವಿಯತ್ ಪ್ರಜೆಯಾದ ಯೂರಿ ಗಗಾರಿನ್ ನಡೆಸಿದ ಮೊದಲ ಮಾನವ ಬಾಹ್ಯಾಕಾಶ ಹಾರಾಟದ ದಿನಾಂಕವಾಗಿದೆ.

🚀ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ: ರಾಕೇಶ್ ಶರ್ಮಾ

🔶ಇಸ್ರೋ NIT-ರೂರ್ಕೆಲಾದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕಾವು ಕೇಂದ್ರವನ್ನು ಸ್ಥಾಪಿಸಲಿದೆ.

🔶ನಾಸಾ ಉಡಾವಣೆ ಮಾಡಿದ ವಿಶ್ವದ ಅತಿ ದೊಡ್ಡ ದೂರದರ್ಶಕ ಜೇಮ್ಸ್ ವೆಬ್ ಸ್ಪೇಸ್.

🔶ಚೀನಾ ಬಾಹ್ಯಾಕಾಶ ಪರಿಶೋಧನೆಗಾಗಿ "ಶಿಜಿಯಾನ್-6 05" ಉಪಗ್ರಹಗಳನ್ನು ಉಡಾವಣೆ ಮಾಡಿದೆ

🔶ಫ್ರಾನ್ಸ್ "AsterX" ಬಾಹ್ಯಾಕಾಶದಲ್ಲಿ ತನ್ನ ಮೊದಲನೇ ಮಿಲಿಟರಿ ವ್ಯಾಯಾಮವನ್ನು ನಡೆಸುತ್ತದೆ.

🔶ಇನ್ಫೋಸಿಸ್ ಮತ್ತು ರೋಲ್ಸ್ ರಾಯ್ಸ್ 'ಏರೋಸ್ಪೇಸ್ ಇಂಜಿನಿಯರಿಂಗ್ ಮತ್ತು ಡಿಜಿಟಲ್ ಇನ್ನೋವೇಶನ್ ಸೆಂಟರ್' ಅನ್ನು ಪ್ರಾರಂಭಿಸಿದೆ

🔶SpaceX ಒಂದೇ ಉಡಾವಣೆಯಲ್ಲಿ 143 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ.

🔶ಜಪಾನ್ 2023 ರಲ್ಲಿ ಬಾಹ್ಯಾಕಾಶ ಜಂಕ್ ಅನ್ನು ಕಡಿಮೆ ಮಾಡಲು ವಿಶ್ವದ ಮೊದಲ ಮರದ ಉಪಗ್ರಹವನ್ನು ಉಡಾವಣೆ ಮಾಡಲಿದೆ.

🔶ಭಾರತೀಯ ಮೂಲದ ಅನಿಲ್ ಮೆನನ್ ಅವರು ಸ್ಪೇಸ್‌ಎಕ್ಸ್‌ನ ಮೊದಲ ಫ್ಲೈಟ್ ಸರ್ಜನ್.

🔶ವಿಶ್ವ ಬಾಹ್ಯಾಕಾಶ ವಾರ: 04-10 ಅಕ್ಟೋಬರ್
ನ್ಯೂಸ್ 2021-22 ರಲ್ಲಿ ಹೊಸ ಅಧ್ಯಕ್ಷರು

♦️ ಬಜ್ರಾಮ್ ಬೇಗಜ್ : ಅಲ್ಬೇನಿಯಾ.

♦️ ಹಸನ್ ಶೇಖ್ ಮೊಹಮ್ಮದ್ : ಸೊಮಾಲಿಯಾ.

♦️ ಎಮ್ಯಾನುಯೆಲ್ ಮ್ಯಾಕ್ರನ್ : ಫ್ರಾನ್ಸ್.

♦️ ಅಲೆಕ್ಸಾಂಡರ್ ವುಸಿಕ್ : ಸರ್ಬಿಯಾ

♦️ ಸೆರ್ದಾರ್ ಬರ್ಡಿಮುಖಮೆಡೋವ್:
ತುರ್ಕಮೆನಿಸ್ತಾನ್.

♦️ ಕ್ಯಾಟಲಿನ್ ಇವಾ ನೊವಾಕ್: ಹಂಗೇರಿ.

♦️ ಗೇಬ್ರಿಯಲ್ ಬೋರಿಕ್ ಫಾಂಟ್: ಚಿಲಿ.

♦️ ಯೂನ್ ಸುಕ್-ಯೋಲ್ : ದಕ್ಷಿಣ ಕೊರಿಯಾ.

♦️ ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್:
ಜರ್ಮನಿ.

♦️ ಕ್ಸಿಯೋಮಾರಾ ಕ್ಯಾಸ್ಟ್ರೋ : ಹೊಂಡುರಾಸ್.

♦️ ಡೇನಿಯಲ್ ಒರ್ಟೆಗಾ : ನಿಕರಾಗುವಾ.

♦️ ಗೇಬ್ರಿಯಲ್ ಬೋರಿಕ್ : ಚಿಲಿ.

♦️ ಆಡಮಾ ಬಾರೋ : ಗ್ಯಾಂಬಿಯಾ.

♦️ ಶವ್ಕತ್ ಮಿರ್ಜಿಯೋವ್ : ಉಜ್ಬೇಕಿಸ್ತಾನ್.

♦️ ಸಾಂಡ್ರಾ ಮೇಸನ್ : ಬಾರ್ಬಡೋಸ್.

♦️ ಹಕೈಂಡೆ ಹಿಚಿಲೆಮಾ : ಜಾಂಬಿಯಾ.

♦️ ಇಬ್ರಾಹಿಂ ರೈಸಿ : ಇರಾನ್.

♦️ ಉಖ್ನಾ ಖುರೆಲ್ಸುಖ್ : ಮಂಗೋಲಿಯಾ.

♦️ ಐಸಾಕ್ ಹೆರ್ಜಾಗ್ : ಇಸ್ರೇಲ್.

♦️ ಗಿಲ್ಲೆರ್ಮೊ ಲಾಸ್ಸೊ : ಈಕ್ವೆಡಾರ್.
💐10/06/2022💐

By
Ganga fm
7338438629 (Inform my mistakes).
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು

1) ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಶಸ್ತ್ರಾಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದ್ದವನು? ( KAS-1999 )
👉 ಕಲ್ಯಾಣಸ್ವಾಮಿ,

2) ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದ ಸ್ಥಳ? ( KAS1999 )
👉 ಧಾರವಾಡ

3) ಕರ್ನಾಟಕದ ಬಾರ್ಡೋಲಿ ಎಂದು ಜನಪ್ರಿಯವಾಗಿದ್ದ ಕೇಂದ್ರ?
👉 ಅಂಕೋಲಾ

4) ಮೈಲಾರ ಮಹದೇವಪ್ಪ ಈ ಚಳುವಳಿಯಲ್ಲಿ ಭಾಗವಹಿಸಿದ್ದರು? ( KAS-1999 )
👉 ಉಪ್ಪಿನ ಸತ್ಯಾಗ್ರಹ,

5) ಹಿಂದಿನ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಚಳವಳಿ ಆರಂಭವಾದದ್ದು? ( KAS-1999 )
👉 1947ರಲ್ಲಿ

6)19 ಜಿಲ್ಲೆಗಳಿಂದ ಕೂಡಿದ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು? ( KAS-1999 )
👉 ನವಂಬರ್ 1, 1956

7)1946ರಲ್ಲಿ ಕರ್ನಾಟಕದ ಏಕೀಕರಣದ ಸಮಾವೇಶ ನಡೆದ ಸ್ಥಳ? ( KAS-2005 )
👉 ಮುಂಬೈ,

8) ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವನ್ನು "ಯೂನಿಟ್ ಕಾಂಗ್ರೆಸ್" ಎಂದು ಎಕರೆಯಲಾಗಿದೆ, ಕಾಂಗ್ರೆಸ್ ಅಧಿವೇಶನದ ಜೊತೆಜೊತೆಗೆ ನಡೆದ ಅಧಿವೇಶನ ಯಾವುದು? ( KAS-2002 )
👉 ಅಖಿಲ ಭಾರತ ಸಾಮಾಜಿಕ ಸಮ್ಮೇಳ ,

9) ವಸಾಹತುಶಾಹಿ ಭಾರತದಲ್ಲಿ ಅರಸರ ಶ್ರೇಣಿಯಲ್ಲಿ ಮೈಸೂರು ಸಂಸ್ಥಾನದ ಸಂಸ್ಥಾನವು ಈ ರೀತಿಯದು? ( KAS-2015 )
👉 21ಬಂದೂಕು ಸಲಾಮಿನ ರಾಜ್ಯ,

10)1930ರ ಎಪ್ರಿಲ್ ನಲ್ಲಿ ಬೆಳಗಾವಿನಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನನ್ನು ಮುರಿದವರು ಯಾರು? ( KAS-2017 )
👉 ಗಂಗಾಧರರಾವ್ ದೇಶಪಾಂಡೆ ,

11) ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದ ಕನ್ನಡಿಗ? ( KAS-2017 )
👉 ಮೈಲಾರ ಮಹದೇವಪ್ಪ,

12) ಮೈಸೂರಿನಲ್ಲಿ ಶಾಲೆಯನ್ನು ಯಾವ ಮೊದಲ ಕ್ರೈಸ್ತ ಮಿಷನರಿ ಪ್ರಾರಂಭಿಸಿತು?
👉 ವೆಸ್ಲಿಯನ್ ,

13) ಅವನು ರಾಣಿ ಚೆನ್ನಮ್ಮನ ಸೇನಾ ದಂಡನಾಯಕನಾಗಿದ್ದು ಗೆರಿಲ್ಲ ತಂತ್ರದಿಂದ ಬ್ರಿಟಿಷರೊಡನೆ ಹೋರಾಟ ನಡೆಸಿದ್ದ ಕರ್ನಾಟಕದ ಪ್ರಸಿದ್ಧ ಸ್ವತಂತ್ರ ಹೋರಾಟಗಾರ ಯಾರು? ( KAS-2017 )
👉 ಸಂಗೊಳ್ಳಿ ರಾಯಣ್ಣ ,

14) ಸರ್ಕಾರದಡಿ ಉದ್ಯೋಗಗಳನ್ನು ಗಳಿಸಲು ಬ್ರಾಹ್ಮಣರಲ್ಲದವರನ್ನು ಪ್ರೋತ್ಸಾಹಿಸಲು ಮುಖ್ಯ ಸಮಿತಿಗಳು ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿ ನೀಡಲು ಮತ್ತು ವಿಚಾರಣೆ ನಡೆಸಲು ಮೈಸೂರಿನ ಮಹಾರಾಜರು 1918ರಲ್ಲಿ ನೇಮಿಸಿದ ಸಮಿತಿ ಯಾವುದು? ( KAS-2017 )
👉 ಮಿಲ್ಲರ್ ಸಮಿತಿ,

15) 1953 ರಲ್ಲಿನ ರಾಜ್ಯಗಳ ಪುನರ್ ರಚನಾ ಆಯೋಗವು ಇವರ ಅಧ್ಯಕ್ಷತೆ ಮತ್ತು ಸದಸ್ಯತ್ವದಲ್ಲಿ ರಚಿಸಲಾಯಿತು? ( KAS-2017 )
👉 ಅಧ್ಯಕ್ಷರು= ಫಜಲ್ ಅಲಿ ,
ಸದಸ್ಯರು= H,N,ಕುಂಜರು, ಕೆ, ಎಂ, ಪನಿಕರ್

16)1928ರ ಬೆಂಗಳೂರಿನ ಗಲಭೆಗಳಲ್ಲಿ ಕಂಡು ಬಂದಿರುವಂತಹ ಗಣಪತಿ ಗಲಭೆ ಮತ್ತು ಹಿಂದೂ-ಮುಸ್ಲಿಂ ಸರಣಿ ಸಂಘರ್ಷಗಳು ಬೆಂಗಳೂರು ನಗರದಲ್ಲಿ ಶಾಲೆಯ ಆವರಣದಲ್ಲಿ ಒಂದು ಗಣೇಶ ಪ್ರತಿಮೆಯ ಮೇಲೆ ಕಮಾನುಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಉಂಟಾಗಿದ್ದು ಇದನ್ನು ಮೈಸೂರಿನ ಮಹಾರಾಜರು ಖಂಡಿಸಿ ಈ ಘಟನೆಯ ಬಗ್ಗೆ ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸಿತು ಈ ಸಮಿತಿಯ ಮುಖ್ಯಸ್ಥರು ಯಾರು? ( KAS-2017 )
👉 ಸರ್ ಎಂ ವಿಶ್ವೇಶ್ವರಯ್ಯ

17) ಯಾವ ವರದಿಯನ್ನಾದರಿಸಿ 1956 ರಲ್ಲಿ ಕರ್ನಾಟಕ ರೂಪಗೊಂಡಿತು? ( PSI-2018 )
👉 ಫಜಲ್ ಅಲಿ ಸಮಿತಿ

18) ಮೈಸೂರಿನ ಅಂಬಾವಿಲಾಸ ಅರಮನೆಯನ್ನು ವಿನ್ಯಾಸಗೊಳಿಸಿದವರು? ( PSI/ RSI-2014.2016 )
👉 ಹೆನ್ರಿ ಇರ್ವಿನ್,

19) ಜಯ ಭಾರತ ಜನನಿಯ ತನುಜಾತೆ ರಚಿಸಿದವರು? ( PSI-2015 )
👉 ಕುವೆಂಪು,

20) ಬೆಂಗಳೂರಿನ ಕಬ್ಬನ್ ಪಾರ್ಕ್ ನಿರ್ಮಾಪಕ? ( PSI-2015 )
👉 ಜಾನ್ ವೀಡ

21) ಕರ್ನಾಟಕದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟಮೊದಲ ಸಮಾಚಾರ ಪತ್ರಿಕೆ? ( PSI-2014 )
👉 ಮಂಗಳೂರು ಸಮಾಚಾರ,

22) ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾದ ನಂದಿಬೆಟ್ಟ ಇರುವ ಜಿಲ್ಲೆ? ( PSI-2014 )
👉 ಚಿಕ್ಕಬಳ್ಳಾಪುರ

23) ಮಹಾತ್ಮ ಗಾಂಧೀಜಿಯವರು ತಮ್ಮ ಜೀವಿತಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ? ( PSI-2014 )
👉 ಬೆಳಗಾವಿ-1924ರಲ್ಲಿ

24) ಹಿಂದೂಸ್ತಾನ ಸೇವಾದಳ ವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದವರು? ( PSI-2018 )
👉 ಎನ್ ಎಸ್ ಹರ್ಡೆಕರ್,

25) ಮೈಸೂರು ಚಲೋ ಚಳುವಳಿ ನಡೆದ ವರ್ಷ? ( PSI-2013 )
👉 1947

26) ಕನ್ನಡದ ಧ್ವಜವನ್ನು ವಿನ್ಯಾಸ ಮಾಡಿದವರು? ( PSI-2009 )
👉 ಎಂ ರಾಮಮೂರ್ತಿ ,

27) ನಮ್ಮ ನಾಡಿನಲ್ಲಿ ಆಶ್ವಯುಜ ಮಾಸದಲ್ಲಿ ಬರುವ ಹಬ್ಬ ಅಂದರೆ? ( PSI-2009 )
👉 ನವರಾತ್ರಿ,

28) ಮೈಸೂರು ವಿಶ್ವವಿದ್ಯಾಲಯದ ಸ್ಥಾಪಕರು? ( PSI-2009 )
👉 4ನೇ ಶ್ರೀ ಕೃಷ್ಣರಾಜಒಡೆಯ

29) ಧ್ವಜ ಸತ್ಯಾಗ್ರಹ ನಡೆದ ಶಿವಪುರ ಯಾವ ಜಿಲ್ಲೆಯಲ್ಲಿದೆ? ( PSI-2009 )
👉 ಮಂಡ್ಯ

30) ಕರ್ನಾಟಕದಲ್ಲಿ ಗಾಂಧೀಜಿ ಅತ್ಯಂತ ಹೆಚ್ಚು ಸಮಯ ತಂಗಿದ್ದ ವರ್ಷ? ( PSI-2007 )
👉 1927

31) ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ? ( PSI-2006 )
👉 ಶಿರಾ

32) ಕರ್ನಾಟಕ ದಂಡಿ ಎಂದು ಕರೆಯುವರು? ( PSI-2006 )
👉 ಅಂಕೋಲಾ

33) ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ? ( PSI-2005 )
👉 ಜನಪ್ರತಿನಿಧಿ ಸರ್ಕಾರಕ್ಕೆ ಚಳುವಳಿ ,

34) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಈ ಕವಿತೆಯನ್ನು ರಚಿಸಿದವರು? ( PSI-2005 )
👉 ಹುಯಿಗೋಳ್ ನಾರಾಯಣರಾವ್

35) ಹೈದರಾಬಾದಿನ ನಿಜಾಮರ ನಿಯಂತ್ರಣದಲ್ಲಿದ್ದ ಹೈದ್ರಾಬಾದ-ಕರ್ನಾಟಕ ಪ್ರದೇಶವು ಭಾರತದ ಒಕ್ಕೂಟದಲ್ಲಿ ಸೇರಿದ್ದು? ( PSI-2002 )
👉 1948 ಸಪ್ಟಂಬರ್
Q1. ಭ್ರಷ್ಟ ಅಧಿಕಾರಿಗಳನ್ನು ಪುರಾವೆಯೊಂದಿಗೆ ವರದಿ ಮಾಡಲು ಯಾವ ರಾಜ್ಯವು '14400 ಅಪ್ಲಿಕೇಶನ್' ಅನ್ನು ಪ್ರಾರಂಭಿಸಿದೆ?
(ಎ) ಉತ್ತರ ಪ್ರದೇಶ
(ಬಿ) ಮಹಾರಾಷ್ಟ್ರ
(ಸಿ) ಜಾರ್ಖಂಡ್
(ಡಿ) ಆಂಧ್ರ ಪ್ರದೇಶ
Answer-A

Q2. ಯಾವ ರಾಜ್ಯ ಸರ್ಕಾರವು 'ನಾನ್ ಮುಧಲ್ವನ್' ಅಡಿಯಲ್ಲಿ ವಿದ್ಯಾರ್ಥಿಗಳಿಗಾಗಿ 'ನಲಯ ತಿರನ್' ಕೌಶಲ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿದೆ?
(ಎ) ಕೇರಳ
(ಬಿ) ಗುಜರಾತ್
(ಸಿ) ರಾಜಸ್ಥಾನ
(ಡಿ)ತಮಿಳುನಾಡು
Answer-D

Q3. ಇಂಟರ್ನ್ಯಾಷನಲ್ ಅಲ್ಯೂಮಿನಿಯಂ ಇನ್ಸ್ಟಿಟ್ಯೂಟ್ (IAI) ನ ಹೊಸ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
(ಎ) ಸ್ವರೂಪ್ ಕುಮಾರ್ ಸಹಾ
(ಬಿ) ಮೈಲ್ಸ್ ಪ್ರೊಸೆಸರ್
(ಸಿ) ಬೆನ್ ಕಹರ್ಸ್
(ಡಿ) ಸತೀಶ್ ಪೈ
Answer-D

Q4. ಭಾರತವು ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಪರಮಾಣು ಸಾಮರ್ಥ್ಯದ ಅಗ್ನಿ-4 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಕ್ಷಿಪಣಿ ವ್ಯಾಪ್ತಿಯು ಎಷ್ಟು?
(ಎ) 4000 ಕಿಮೀ
(ಬಿ) 5000 ಕಿಮೀ
(ಸಿ) 7000 ಕಿಮೀ
(ಡಿ) 4000ಕಿಮೀ
Answer-D

Q5. ಮಂಗೋಲಿಯಾದಲ್ಲಿ "ಖಾನ್ ಕ್ವೆಸ್ಟ್ 2022" ವ್ಯಾಯಾಮದಲ್ಲಿ ಇತ್ತೀಚೆಗೆ ಯಾವ ಸಶಸ್ತ್ರ ಪಡೆ ಭಾಗವಹಿಸಿದೆ?
(ಎ) ಭಾರತೀಯ ನೌಕಾಪಡೆ
(ಬಿ) ಭಾರತೀಯ ವಾಯುಪಡೆ
(ಸಿ) ಭಾರತೀಯ ಸೇನೆ
(ಡಿ) ಭಾರತೀಯ ಕೋಸ್ಟ್ ಗಾರ್ಡ್
Answer-C

Q6. ವಿಶ್ವ ಸಾಗರ ದಿನವನ್ನು ಪ್ರಪಂಚದಾದ್ಯಂತ ಪ್ರತಿ ವರ್ಷ ___ ರಂದು ಆಚರಿಸಲಾಗುತ್ತದೆ.
(ಎ) ಜೂನ್ 4
(ಬಿ) ಜೂನ್ 5
(ಸಿ) ಜೂನ್ 6
(ಡಿ) ಜೂನ್ 8
Answer-D

Q7. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ _ ಶೇಕಡಾಕ್ಕೆ ಹೆಚ್ಚಿಸಲು ಸರ್ವಾನುಮತದಿಂದ ಮತ ಚಲಾಯಿಸಿದರು.
(ಎ) 4.70
(ಬಿ) 4.90
(ಸಿ) 4.50
(ಡಿ) 4.80
Answer-B


Q8. ಸ್ವಿಟ್ಜರ್ಲೆಂಡ್‌ನ ಲೌಸನ್ನೆಯಲ್ಲಿ ನಡೆದ ಉದ್ಘಾಟನಾ ಎಫ್‌ಐಎಚ್ ಹಾಕಿ 5 ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಯಾರನ್ನು ಸೋಲಿಸಿತು?
(ಎ) ಬೆಲ್ಜಿಯಂ
(ಬಿ) ಆಸ್ಟ್ರೇಲಿಯಾ
(ಸಿ) ಕೆನಡಾ
(ಡಿ) ಪೋಲೆಂಡ್
Answer-D

Q9. ವಿಶ್ವ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತಕ್ಕೆ ತನ್ನ ಬೆಳವಣಿಗೆಯ ಮುನ್ಸೂಚನೆಯನ್ನು _ ಪ್ರತಿಶತಕ್ಕೆ ಕಡಿತಗೊಳಿಸಿದೆ.
(ಎ) 7.5
(ಬಿ) 6.5
(ಸಿ) 5.5
(ಡಿ) 8.5
Answer-A

Q10. ಈ ಕೆಳಗಿನ ಯಾವ ರಾಜ್ಯವು ಮಾಹಿತಿ ತಂತ್ರಜ್ಞಾನ (IT) ಕ್ಷೇತ್ರ ಮತ್ತು ಪ್ರವಾಸೋದ್ಯಮ ಕ್ಷೇತ್ರದ ನಡುವಿನ ಸಹಯೋಗದೊಂದಿಗೆ 'ಬೀಚ್ ವಿಜಿಲ್ ಆಪ್' ಅನ್ನು ಪ್ರಾರಂಭಿಸಿದೆ?
(ಎ) ತಮಿಳುನಾಡು
(ಬಿ) ಗೋವಾ
(ಸಿ) ಆಂಧ್ರ ಪ್ರದೇಶ
(ಡಿ) ಕೇರಳ
Answer-B

Q11. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಯ ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ (MD) ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?
(ಎ) ದಿನಕರ್ ಸಿಂಗ್
(ಬಿ) ರೋಶ್ನಿ ಸಿಂಗ್
(ಸಿ) ವಿಮಲ್ ಶರ್ಮಾ
(ಡಿ) ಅಲೋಕ್ ಕುಮಾರ್ ಚೌಧರಿ
Answer-D

Q12. 'ದೃಷ್ಟಿಹೀನ ಸ್ನೇಹಿ' ನಾಣ್ಯಗಳ ವಿಶೇಷ ಸರಣಿಯನ್ನು ಯಾರು ಬಿಡುಗಡೆ ಮಾಡಿದ್ದಾರೆ. ರೂ 1, ರೂ 2, 5, 10 ಮತ್ತು 20 ಮುಖಬೆಲೆಯ ನಾಣ್ಯಗಳು ಆಜಾದಿ ಕಾ ಅಮೃತ್ ಮಹೋತ್ಸವ (AKAM) ವಿನ್ಯಾಸವನ್ನು ಹೊಂದಿರುತ್ತದೆ?
(ಎ) ಅಮಿತ್ ಶಾ
(ಬಿ) ನರೇಂದ್ರ ಮೋದಿ
(ಸಿ) ರಾಜನಾಥ್ ಸಿಂಗ್
(ಡಿ) ನಿರ್ಮಲಾ ಸೀತಾರಾಮನ್
Answer.-B

Q13. 2022 ರ ವಿಶ್ವ ಸಾಗರ ದಿನದ ಥೀಮ್ ಏನು?
(ಎ) ಲಿಂಗ ಮತ್ತು ಸಾಗರ
(ಬಿ) ಸಾಗರ: ಜೀವನ ಮತ್ತು ಜೀವನೋಪಾಯಗಳು
(ಸಿ) ಪುನರುಜ್ಜೀವನ: ಸಾಗರಕ್ಕಾಗಿ ಸಾಮೂಹಿಕ ಕ್ರಿಯೆ
(ಡಿ) ನಮ್ಮ ಸಾಗರವನ್ನು ಸ್ವಚ್ಛಗೊಳಿಸಿ!
(ಸಿ) ಪುನರುಜ್ಜೀವನ: ಸಾಗರಕ್ಕಾಗಿ ಸಾಮೂಹಿಕ ಕ್ರಿಯೆ

Q14. ಸೀತಾಲ್ ಷಷ್ಠಿ ಒಂದು ಪವಿತ್ರ ಹಿಂದೂ ಹಬ್ಬವನ್ನು ____ ನಲ್ಲಿ ಆಚರಿಸಲಾಗುತ್ತಿದೆ.
(ಎ) ಒಡಿಶಾ
(ಬಿ) ರಾಜಸ್ಥಾನ
(ಸಿ) ಉತ್ತರ ಪ್ರದೇಶ
(ಡಿ) ಉತ್ತರಾಖಂಡ
Answer-(ಎ) ಒಡಿಶಾ


Q15. ಮಾರುತಿ ಸುಜುಕಿ ಏಷ್ಯಾದ ಅತಿದೊಡ್ಡ 20 MWp ಕಾರ್ಪೋರ್ಟ್ ಮಾದರಿಯ ಸೌರ ಸ್ಥಾವರವನ್ನು ____ ನಲ್ಲಿ ಸ್ಥಾಪಿಸುತ್ತದೆ.
(ಎ) ಪಂಜಾಬ್
(ಬಿ) ಹರಿಯಾಣ
(ಸಿ) ರಾಜಸ್ಥಾನ
(ಡಿ) ಮಹಾರಾಷ್ಟ್ರ

Ans-(ಬಿ) ಹರಿಯಾಣ
ಓದಲೇಬೇಕಾದ ಮಾಹಿತಿ ಇದು

💐 61 ನೇ ಆವೃತ್ತಿಯ ಅಂತರರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಚೆನ್ನೈ ನಗರದಲ್ಲಿ ನಡೆಯಲಿದೆ.

💐 ಪಂಚಕುಲ ದಲ್ಲಿ ನಡೆದ ಖೇಲೋ ಇಂಡಿಯಾ ಯುತ್ಸ್ ಗೇಮ್ಸ್ ನಲ್ಲಿ ಕರ್ನಾಟಕ ಇದುವರೆಗೂ 10 ಪದಕವನ್ನು ಗೆದ್ದಿದೆ.

💐 ನಾಯಕನಾಗಿ ಅತ್ಯಂತ ವೇಗದಲ್ಲಿ 1000 ರನ್ ಗಳಿಸುವುದರ ಮುಖಾಂತರ ವಿರಾಟ್ ಕೊಹ್ಲಿ ದಾಖಲೆ ಮುರಿದ ಕ್ರಿಕೆಟ್ ಆಟಗಾರ -ಬಾಬರ್ ಅಜಂ

💐 ಇರಾನ್ ಅಣುಸ್ಥಾವರ ಒಪ್ಪಂದ ನಡೆದ ವರ್ಷ - 2015

💐 ದೇಶದಲ್ಲಿ ಮೊದಲ ಬಾರಿಗೆ ಸ್ವಯಂ ವಿವಾಹವಾದ ಮಹಿಳೆ - ಕ್ಷಮಾ ಬಿಂದು (ಗುಜರಾತ್)

💐 ಬಾಲಾಪರಾಧಿ ಕಾಯ್ದೆ - 2015 ರ ತಿದ್ದುಪಡಿ ಪ್ರಕಾರ 16-18 ವರ್ಷದ ಮಕ್ಕಳನ್ನು ಬಾಲಾಪರಾಧಿ ಎಂದು ಪರಿಗಣಿಸಲಾಗುತ್ತದೆ.

💐 ದಂಡಿ ಸತ್ಯಾಗ್ರಹ ದಲ್ಲಿ ಭಾಗವಹಿಸಿದ್ದ ಕರ್ನಾಟಕದ ಏಕೈಕ ವ್ಯಕ್ತಿ ಹಾಗೂ ಅತ್ಯಂತ ಕಿರಿಯ ವ್ಯಕ್ತಿ - ಮೈಲಾರ ಮಹಾದೇವಪ್ಪ

💐 ಇತ್ತೀಚಿಗೆ ಕೇಂದ್ರ ಸರಕಾರ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿದೆ.
(ಸ್ವಾಮೀನಾಥನ ಆಯೋಗದ ಪ್ರಕಾರ ಕೃಷಿ ವೆಚ್ಚದ ಶೇ 50 ರಷ್ಟು ಬೆಂಬಲ ನಿಗದಿ ಮಾಡಬೇಕೆಂದು ಶಿಪಾರಸ್ಸು ಮಾಡಿದೆ)

💐 ಚಿತ್ರ ಸಾಹಿತ್ಯ ಪರುಷೋತ್ತಮ ಕಣಗಾಲ್ ಅಮೆರಿಕಾದಲ್ಲಿ ನಿಧನ
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )

1) ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* ಜಲಜನಕ.

2) ಅತಿ ಹಗುರವಾದ ಲೋಹ ಯಾವುದು?
* ಲಿಥಿಯಂ.

3) ಅತಿ ಭಾರವಾದ ಲೋಹ ಯಾವುದು?
* ಒಸ್ಮೆನೆಯಂ.

4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
* ಸೈನೈಡೇಶನ್.

5) ಅತಿ ಹಗುರವಾದ ಮೂಲವಸ್ತು ಯಾವುದು?
* ಜಲಜನಕ.

6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* ಸಾರಜನಕ.

7) ಪ್ರೋಟಾನ್ ಕಂಡು ಹಿಡಿದವರು ಯಾರು?
* ರುದರ್ ಫರ್ಡ್.

8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* ಆಮ್ಲಜನಕ.
9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು ಯಾರು?
* ಜೇಮ್ಸ್ ಚಾಡ್ ವಿಕ್.

10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು ಯಾರು?
* ಜೆ.ಜೆ.ಥಾಮ್ಸನ್.

11) ಒಂದು ಪರಮಾಣುವಿನಲ್ಲಿರುವ ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ ಸಂಖ್ಯೆಯೇ --?
* ಪರಮಾಣು ಸಂಖ್ಯೆ.

12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ ಮೂಲವಸ್ತು ಯಾವುದು?
* ಹಿಲಿಯಂ.

13) ಮೂರ್ಖರ ಚಿನ್ನ ಎಂದು ಯಾವುದನ್ನು ಕರೆಯುತ್ತಾರೆ?
* ಕಬ್ಬಿಣದ ಪೈರೆಟ್ಸ್.

14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು -- ಬಳಸುತ್ತಾರೆ?
* ಒಸ್ಮೆನಿಯಂ.

15) ಪ್ರಾಚೀನ ಕಾಲದ ಮಾನವ ಮೊದಲ ಬಳಸಿದ ಲೋಹ ಯಾವುದು?
* ತಾಮ್ರ.

16) ಉದು ಕುಲುಮೆಯಿಂದ ಪಡೆದ ಕಬ್ಬಿಣ ಯಾವುದು?
* ಬೀಡು ಕಬ್ಬಿಣ.

17) ಚಾಲ್ಕೋಪೈರೇಟ್ ಎಂಬುದು --- ದ ಅದಿರು.
* ತಾಮ್ರದ.

18) ಟಮೋಟದಲ್ಲಿರುವ ಆಮ್ಲ ಯಾವುದು?
* ಅಕ್ಸಾಲಿಕ್.

20) "ಆಮ್ಲಗಳ ರಾಜ" ಎಂದು ಯಾವ ಆಮ್ಲವನ್ನು ಕರೆಯುವರು?
* ಸಲ್ಫೂರಿಕ್ ಆಮ್ಲ.

21) ಕಾಸ್ಟಿಕ್ ಸೋಡದ ರಾಸಾಯನಿಕ ಹೆಸರೇನು?
* ಸೋಡಿಯಂ ಹೈಡ್ರಾಕ್ಸೈಡ್.

22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು ಯಾವುದನ್ನು ಕರೆಯುವರು?
* ಮೆಗ್ನಿಷಿಯಂ ಹೈಡ್ರಾಕ್ಸೈಡ್.

23) ಅಡುಗೆ ಉಪ್ಪುವಿನ ರಾಸಾಯನಿಕ ಹೆಸರೇನು?
* ಸೋಡಿಯಂ ಕ್ಲೋರೈಡ್.

24) ಗಡಸು ನೀರನ್ನು ಮೃದು ಮಾಡಲು -- ಬಳಸುತ್ತಾರೆ?
* ಸೋಡಿಯಂ ಕಾರ್ಬೋನೆಟ್.

25) ಕೆಂಪು ಇರುವೆ ಕಚ್ಚಿದಾಗ ಉರಿಯಲು ಕಾರಣವೇನು?
* ಪಾರ್ಮಿಕ್ ಆಮ್ಲ.

26) ಗೋಧಿಯಲ್ಲಿರುವ ಆಮ್ಲ ಯಾವುದು?
* ಗ್ಲುಮಟಿಕ್.

27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ ಯಾವುದು?
* ಪೋಲಿಕ್.

28) ಸಾರಜನಕ ಕಂಡು ಹಿಡಿದವರು ಯಾರು?
* ರುದರ್ ಪೊರ್ಡ್.

29) ಆಮ್ಲಜನಕ ಕಂಡು ಹಿಡಿದವರು ಯಾರು?
* ಪ್ರಿಸ್ಟೆ.

30) ಗಾಳಿಯ ಆರ್ದತೆ ಅಳೆಯಲು -- ಬಳಸುತ್ತಾರೆ?
* ಹೈಗ್ರೋಮೀಟರ್.

31) ಹೈಗ್ರೋಮೀಟರ್ ಅನ್ನು -- ಎಂದು ಕರೆಯುತ್ತಾರೆ?
* ಸೈಕೋಮೀಟರ್.

32) ಯಾವುದರ ವಯಸ್ಸು ಪತ್ತೆಗೆ ಸಿ-14 ಪರೀಕ್ಷೆ ನಡೆಸುತ್ತಾರೆ?
* ಪಳೆಯುಳಿಕೆಗಳ.

33) ಕೋಬಾಲ್ಟ್ 60 ಯನ್ನು ಯಾವ ಚಿಕಿತ್ಸೆಯಲ್ಲಿ ಬಳಸುತ್ತಾರೆ?
* ಕ್ಯಾನ್ಸರ್.

34) ಡುರಾಲು ಮಿನಿಯಂ ಲೋಹವನ್ನು ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
* ವಿಮಾನ.

35) ನೀರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು?
* ಬಿ & ಸಿ.

36) ರಿಕೆಟ್ಸ್ ರೋಗ ಯಾರಲ್ಲಿ ಕಂಡು ಬರುವುದು?
* ಮಕ್ಕಳಲ್ಲಿ.

37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು ಬಾಗಿರುವ ಬಣ್ಣ ಯಾವುದು?
* ನೇರಳೆ.

38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ ಬಣ್ಣ ಯಾವುದು?
* ಕೆಂಪು.

39) ಆಲೂಗಡ್ಡೆ ಯಾವುದರ ರೂಪಾಂತರವಾಗಿದೆ?
* ಬೇರು.

4 0) ಮಾನವನ ದೇಹದ ಉದ್ದವಾದ ಮೂಳೆ ಯಾವುದು?
* ತೊಡೆಮೂಳೆ(ಫೀಮರ್).

41) ವಯಸ್ಕರಲ್ಲಿ ಕೆಂಪು ರಕ್ತಕಣಗಳು ಹುಟ್ಟುವ ಸ್ಥಳ ಯಾವುದು?
* ಅಸ್ಥಿಮಜ್ಜೆ.

42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ ವಿಟಮಿನ್ ಯಾವು?
* ಎ & ಡಿ.

43) ರಿಕೆಟ್ಸ್ ರೋಗ ತಗುಲುವ ಅಂಗ ಯಾವುದು?
* ಮೂಳೆ.

44) ವೈರಸ್ ಗಳು -- ಯಿಂದ ರೂಪಗೊಂಡಿರುತ್ತವೆ?
* ಆರ್.ಎನ್.ಎ.

45) ತಾಮ್ರ & ತವರದ ಮಿಶ್ರಣ ಯಾವುದು?
* ಕಂಚು.

46) ತಾಮ್ರ & ಸತುಗಳ ಮಿಶ್ರಣ ಯಾವುದು?
* ಹಿತ್ತಾಳೆ.

47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
* ಬ್ಯೂಟೆನ್ & ಪ್ರೋಫೆನ್.

48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
* ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.

49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನಿಲ ಯಾವುದು?
* ಜಲಜನಕ.

50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ ರಾಸಾಯನಿಕ ಯಾವುದು?
* ಎಥಲಿನ್.

51) ಆಳಸಾಗರದಲ್ಲಿ ಉಸಿರಾಟಕ್ಕೆ ಆಮ್ಲಜನಕದೊಂದಿಗೆ ಬಳಸುವ ಅನಿಲ ಯಾವುದು?
* ಸಾರಜನಕ.

52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ ಯಾವುದು?
* ಅಲ್ಯೂಮೀನಿಯಂ.

53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ ಯಾವುದು?
* ಹೀಲಿಯಂ.

54) ಪರಿಶುದ್ಧವಾದ ಕಬ್ಬಿಣ ಯಾವುದು?
* ಮ್ಯಾಗ್ನಟೈಟ್.

55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ ಯಾವುದು?
* ಕಾರ್ಬನ್ ಡೈ ಆಕ್ಸೈಡ್.

56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ ಯಾವುದು?
* ಕಾರ್ಬೋನಿಕ್ ಆಮ್ಲ.

57) ಹಣ್ಣಿನ ರಸ ಸಂರಕ್ಷಿಸಲು ಬಳಸುವ ರಾಸಾಯನಿಕ ಯಾವುದು?
* ಸೋಡಿಯಂ ಬೆಂಜೋಯಿಟ್.

58) "ಆತ್ಮಹತ್ಯಾ ಚೀಲ"ಗಳೆಂದು -- ಗಳನ್ನು ಕರೆಯುತ್ತಾರೆ?
* ಲೈಸೋಜೋಮ್

59) ವಿಟಮಿನ್ ಎ ಕೊರತೆಯಿಂದ -- ಬರುತ್ತದೆ?
* ಇರುಳು ಕುರುಡುತನ

60) ಐಯೋಡಿನ್ ಕೊರತೆಯಿಂದ ಬರುವ ರೋಗ ಯಾವುದು?
* ಗಳಗಂಡ (ಗಾಯಿಟರ್)
ಓದಲೇಬೇಕಾದ ಮಾಹಿತಿ ಇದು

💐 ಕೇಂದ್ರ ಸರಕಾರವು ಉತ್ತರಪ್ರದೇಶದ ಕುಶಿ ನಗರದ ಅರಿಷನವನ್ನು ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಗೆ ಸೇರ್ಪಡೆ ಮಾಡಲು ಮುಂದಾಗಿದೆ.

💐 ತ್ರೀಪುರ ರಾಜಧಾನಿ ಅಗರ್ತಲಾ ಮತ್ತು ಬಾಂಗ್ಲಾದೇಶದ ನಡುವೆ ಎರಡು ಬಳಿಕ ಬಸ್ ಸೇವೆ ಆರಂಭ .

💐 ಅಲಹಾಬಾದ್ ಹೈಕೋರ್ಟ್ ಸ್ಥಾಪನೆಯಾದ ವರ್ಷ - 1866

💐 ಘಟಂ ದೇವರು ಎಂದು ಜನಪ್ರಿಯ ಪಡೆದ ವ್ಯಕ್ತಿ - ತೇಟುಕುಡಿ ಹರಿಹರ ವಿನಾಯಕ್ ರಾವ್ ( ವಿಕ್ಕು ನಾಯಕ)

💐 ದೇಶದಲ್ಲಿ ಅತೀ ಹೆಚ್ಚು ಸಂಬಳ ಪಡೆಯುವ ಐಟಿ ಕಂಪನಿಯ ಸಿ ಇ ಓ - ಇಫ್ರೋ ಸಂಸ್ಥೆಯ ಸಿ ಇ ಓ

💐 ವಿಶ್ವ ಸಂಸ್ಥೆ ವಾಣಿಜ್ಯ ಮತ್ತು ಅಭಿವೃದ್ಧಿಯ ಸಭೆ ವರದಿ ಪ್ರಕಾರ ಪ್ರಪಂಚದಲ್ಲಿ ಅತೀ ಹೆಚ್ಚು ಎಫ್ ಡಿ ಐ ಆಕರ್ಷಣೆ ಮಾಡಿದ ದೇಶ - ಅಮೆರಿಕಾ

💐 ಮುಖ್ಯಮಂತ್ರಿ ಅಮೃತಂ ಯೋಜನೆ ಪರಿಚಯಿಸಿದ ರಾಜ್ಯ - ಗುಜರಾತ್
ಓದಲೇಬೇಕಾದ ಮಾಹಿತಿ ಇದು

💐 ಅಂತರರಾಜ್ಯ ಅಥ್ಲೆಟಿಕ್ಸ್ ನಲ್ಲಿ 1000 ಮೀ ಓಟದಲ್ಲಿ ಅಭೀಷಕ್ ಹಾಗೂ ಸಂಜೀವಿನಿಗೆ ಚಿನ್ನದ ಪದಕ.

💐 2018 ರಲ್ಲಿ ಚಿನ್ನದ ಪದಕ ಗೆದ್ದಿದ ಮೇರಿಕೋಮ್ ಈ ಸಲ ಕಾಮನ್ ವೇಲ್ತ್ ಕೂಟದಿಂದ ಹೊರ ಉಳಿದಿದ್ದಾರೆ.

💐 ನಕ್ಸಲರ್ ದಾಳಿಯಿಂದ ತಂದೆಯನ್ನು ಕಳೆದುಕೊಂಡಿದ್ದ ಜಾರ್ಖಂಡ್ ಸುಪುತ್ರಿ ಕಚ್ಚಪ್ 4 ನೇ ಅವೃತಿಯ ಖೋಲೋ ಇಂಡಿಯಾ ಕಿರಿಯರ ಕೀಡಾಕೂಟದಲ್ಲಿ ಚಿನ್ನದ ಪಡೆದುಕೊಂಡಿದ್ದಾಳೆ.

💐 ಅಮೆಜಾನ್ ಸಂಸ್ಥೆಯ ಸ್ಥಾಪಕ - ಜೆಫ್ ಬೆಜೋಸ್

💐 ಗುಜರಾತ್ ಬೋಪಾಲ್ ಎಂಬಲ್ಲಿ ನರೇಂದ್ರ ಮೋದಿ ಅವರು ಇಸ್ರೋ ಇನ್ ಸ್ಪೇಸ್ ಘಟಕಕ್ಕೆ ಚಾಲನೆ ನೀಡಿದರು.

💐 ಮಹಾರಾಣಾ ಸಹಸ್ರ ವರ್ಷ ಕಾ ಧರ್ಮಯುದ್ದ ಪುಸ್ತಕ ಅನಾವರಣ ಮಾಡಿದವರು - ಅಮಿತ್ ಷಾ

💐 ಭಾರತದಲ್ಲಿ ಅತೀ ಹೆಚ್ಚು ವೇತನ ಪಡೆಯುತ್ತಿರು ಐಟಿ ಉದ್ಯೋಗಿ - ವಿಪ್ರೋ ಸಿ ಇ ಓ ಥಿಯರಿ ಡಾಲಪೋರ್ಟ್
UNCTAD ನ ವಿಶ್ವ ಹೂಡಿಕೆ ವರದಿ: ಭಾರತವು 7 ನೇ ಸ್ಥಾನದಲ್ಲಿದೆ

ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆನ್ ಟ್ರೇಡ್ ಅಂಡ್ ಡೆವಲಪ್‌ಮೆಂಟ್ (UNCTAD) ಪ್ರಕಾರ, ಕಳೆದ ವರ್ಷದಲ್ಲಿ (2021) ವಿದೇಶಿ ನೇರ ಹೂಡಿಕೆಯ (FDI) ಅಗ್ರ ಸ್ವೀಕೃತದಾರರಲ್ಲಿ ಭಾರತವು 7ನೇ ಸ್ಥಾನಕ್ಕೆ ಜಿಗಿದಿದೆ, ಆದರೆ ದೇಶಕ್ಕೆ FDI ಒಳಹರಿವು ಕಡಿಮೆಯಾಗುತ್ತಿದೆ. ಅದರ ಇತ್ತೀಚಿನ ವಿಶ್ವ ಹೂಡಿಕೆ ವರದಿಯಲ್ಲಿ, UNCTAD ಭಾರತಕ್ಕೆ FDI ಒಳಹರಿವು ಹಿಂದಿನ ವರ್ಷದಲ್ಲಿ $ 64 ಶತಕೋಟಿಯಿಂದ 2021 ರಲ್ಲಿ $ 45 ಶತಕೋಟಿಗೆ ಕುಸಿದಿದೆ ಎಂದು ಹೇಳಿದೆ. 2021 ರಲ್ಲಿ ಭಾರತದಿಂದ ಹೊರಗಿನ ಎಫ್‌ಡಿಐ ಶೇಕಡಾ 43 ರಷ್ಟು ಏರಿಕೆಯಾಗಿ $15.5 ಬಿಲಿಯನ್‌ಗೆ ತಲುಪಿದೆ.ಯುನೈಟೆಡ್ ಸ್ಟೇಟ್ಸ್ ($367 ಶತಕೋಟಿ) ಎಫ್‌ಡಿಐನ ಅಗ್ರ ಸ್ವೀಕೃತದಾರರಾಗಿ ಉಳಿದಿದ್ದರೆ, ಚೀನಾ ($181 ಶತಕೋಟಿ) ಮತ್ತು ಹಾಂಗ್ ಕಾಂಗ್ ($141 ಬಿಲಿಯನ್) ಸಹ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಉಳಿಸಿಕೊಂಡಿವೆ. ಎಫ್‌ಡಿಐಗಾಗಿ ಅಗ್ರ 10 ಅತಿಥೇಯ ಆರ್ಥಿಕತೆಗಳಲ್ಲಿ, ಭಾರತ ಮಾತ್ರ ತನ್ನ ಎಫ್‌ಡಿಐ ಒಳಹರಿವಿನಲ್ಲಿ ಕುಸಿತ ಕಂಡಿದೆ.